ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕಾಲ ಮೇಲೆ ಬಂದ ಮಾರಿ ಕಾಡುತ್ತಿದೆ ಜಗವೆಲ್ಲವ.
ಕಾಲವೆಂಬ ಕಾಯವನರಿದು,
ಮನವೆಂಬ ಮಾರಿಯ ಭವಗೆಡಿಸಿ
ನಾ ತಂದೆ ಜ್ಞಾನಶಕ್ತಿಯ.
ಆ ಶಕ್ತಿಯ ಧರ್ಮದಲ್ಲಿ ಮುಕ್ತಿಯ ಗಳಿಸಬಲ್ಲಡೆಕಾಲಾಂತಕ ಭೀಮೇಶ್ವರಲಿಂಗವು ಅವರವರಂಗಕ್ಕೆಹಿಂಗದಿಪ್ಪನು.
-ಡಕ್ಕೆಯ ಬೊಮ್ಮಣ್ಣ































