ಕೇರಳ: ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ದೊಡ್ಡ ಸಾಧನೆ. ಪರಿಶ್ರಮ ಹಾಗೂ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ದೃಢ ನಿರ್ಧಾರ ಹಾಗೂ ಸಾಧಿಸಬೇಕೆಂಬ ಮನಸ್ಸಿದ್ದರೆ ನಮಗೆ ಯಾವುದೂ ಕಷ್ಟವಲ್ಲ ಎಂಬುದನ್ನು ತಿರುವನಂತಪುರದ ಶ್ರೀಜಾ ತೋರಿಸಿ ಕೊಟ್ಟಿದ್ದಾರೆ.
ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ
ಕೇರಳದ ತಿರುವನಂತಪುರದ ಶ್ರೀಜಾ ಬಡತನದ ಕುಟುಂಬದಿಂದ ಬಂದವರು ಆದರೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಧನೆ ಮಾಡಬೇಕೆಂಬ ಕನಸನ್ನು ಬಾಲ್ಯದಿಂದಲೇ ಇರಿಸಿಕೊಂಡಿದ್ದರು. ಅವರ ಗುರಿ ಸಾಧನೆಗೆ ಅವರ ಬಡತನ ಅಡ್ಡಿಯಾಗಲಿಲ್ಲ. ಮನೆಯಲ್ಲಿ ಕಡು ಬಡತನವಿದ್ದರೂ ಆಕೆ ತಮ್ಮ ಗುರಿಯಿಂದ ಹಿಂದೇಟು ಹಾಕಲಿಲ್ಲ. ಏನಾದರಾಗಲೀ ಸಾಧನೆ ಮಾಡಿಯೇ ಮಾಡುತ್ತೇನೆಂಬ ಛಲವನ್ನು ಅವರು ಇರಿಸಿಕೊಂಡರು.
ಶ್ರೀಜಾ 2026 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ 57 ನೇ ರ್ಯಾಂಕ್ ಗಳಿಸಿ, ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಇವರ ತಂದೆ ತಾಯಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದರೂ ಶ್ರೀಜಾ ತಮ್ಮ ಕನಸನ್ನು ನನಸಾಗಿಸುವ ಛಲವನ್ನು ಬಿಡಲಿಲ್ಲ.
ಅವರು ಫಾರ್ಚೂನ್ ಐಎಎಸ್ ಅಕಾಡೆಮಿಯಲ್ಲಿ ಪ್ರತಿದಿನ ಸುಮಾರು ಆರು ಗಂಟೆಗಳ ಕಾಲ ತರಗತಿಗಳಿಗೆ ಹಾಜರಾಗುತ್ತಿದ್ದರು ಮತ್ತು ಸ್ಥಿರವಾದ ಅಭ್ಯಾಸಗಳನ್ನು ಕಾಯ್ದುಕೊಂಡರು. ಶೈಕ್ಷಣಿಕವಾಗಿ, ಶ್ರೀಜಾ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿದರು ಮತ್ತು NET ಪರೀಕ್ಷೆಯಲ್ಲಿ ಉತ್ತೀರ್ಣರಾದರು

































