ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ತನುವಿನ ಮಹಾಮನೆಯಲ್ಲಿ ಮಾಡುವ ಮಾಟ,
ಘನಕ್ಕೆ ಘನವೆಂದು ಎದ್ದಿತ್ತು ಉಪ್ಪರಗುಡಿ
ಲೀಲೋಲ್ಲಾಸವೆಂಬ ಕಳೆ ನೆಟ್ಟಿತ್ತು , ಭವವಿರಹಿತನೆಂಬ ಗುಡಿಗಟ್ಟಿತ್ತು ,
ಮಾಡುವ ದಾಸೋಹಕ್ಕೆ ಕೇಡಿಲ್ಲಾ ಎಂದು.
ಕಾಯ ಸವೆದು ಮನಮುಟ್ಟಿ, ಭಾವನಿಶ್ಚಯವಾಗಿ ಮಾಟಕೂಟಸಂದಿತ್ತು ,
ಮಹಾಮನೆ ಮಹವನೊಡಗೂಡಿತ್ತು ,
ಕಾಯದ ಕಣೆ ಹಿಂಗಿತ್ತು, ಭಾವಗೂಡಿ ಅಳಿಯಿತ್ತು
ಸಗರದ ಬೊಮ್ಮನೊಡೆಯತನುಮನ ಸಂಗಮೇಶ್ವರಲಿಂಗವು ತಾನಾದಲ್ಲಿ ,
-ಸಗರದ ಬೊಮ್ಮಣ್ಣ































