ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕ್ರೋಧ ಬಂದಲ್ಲಿ ಕೊಲ್ಲೆಂಬುದು,
ದಯೆ ಬಂದಲ್ಲಿ ಬೇಡಾ ಎಂಬುದು,
ಅದು ಅರಿವೊ? ಅಜ್ಞಾನವೊ? ಬೇರೊಂದು ಹೊಲಬೊ?
ಮಾಡುವ ಕ್ರೀ ಜಡನೆಂಬುದು, ಕ್ರೀ ಹೊರಗಾದುದು ಅರಿವೆಂಬುದು,
ಅದನರಿವುದು ಅದೇನು ಹೇಳಾ?
ಆತ್ಮನರಿವೊ ಅದೇನು ಮರವೆಯೊ?
ತೊಳೆದಡೆ ಮಡಿಯಾಗಿ ಮಾಸಿದಡೆ ಮೈಲಿಗೆಯಾಗಿ
ಪುಸಿಯಹುದೊಂದೊ ಎರಡೊ?
ಅರಿದಡೆ ತಾನೆಂಬ ಮರೆದಡೆ ಜಗವೆಂಬ
ಉಭಯಕ್ಕೊಳಗಾಗದ ಮುನ್ನವೆ ಅರಿ, ಕಾಮಭಿೀಮ ಜೀವಧನದೊಡೆಯನ.
-ಒಕ್ಕಲಿಗ ಮುದ್ದಣ್ಣ
































