ಬೆಂಗಳೂರು: ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯರು ಮಾತನಾಡಿ KAS ಅಧಿಕಾರಿಗಳಿಗೆ ಪದೋನ್ನತಿ ಬಗ್ಗೆ ಕಂದಾಯ ಸಚಿವರು ಕಾರ್ಯೋನ್ಮುಖರಾಗಿದ್ದು, ಶೀಘ್ರವಾಗಿ ಪದೋನ್ನತಿ ಆಗಲಿದೆ ಎಂದಿದ್ದಾರೆ.
ಶೇ. 33% ಅಧಿಕಾರಿಗಳನ್ನು CEOಗಳಾಗಿ ಬಡ್ತಿ ನೀಡುವ ಭರವಸೆ ನೀಡಿದ್ದಾರೆ. KAS ಅಧಿಕಾರಿಗಳ ಸಂಘದಲ್ಲಿ ಹೆಚ್ಚುವರಿಯಾಗಿ 11 ಕೊಠಡಿಗಳನ್ನು ನಿರ್ಮಿಸಿದ್ದು, ಹೊರಭಾಗಗಳಿಂದ ಆಗಮಿಸುವ ಅಧಿಕಾರಿಗಳಿಗೆ ಉಪಯೋಗವಾಗಲಿದೆ ಎಂದಿದ್ದಾರೆ. ಈ ವೇಳೆ ಸಚಿವ ಕೃಷ್ಣಭೈರೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.
































