ಯಾವುದೇ ಕಲಸಕ್ಕೂ ಎಸ್.ಎಸ್.ಎಲ್. ಸಿ ದಾಖಲು ಮುಖ್ಯ .! ಹಾಗಾದ್ರೆ ನೀವು ಪರೀಕ್ಷೆಗೆ ಕುಳಿತುಕೊಳ್ಳಬೇಕೆ .? ಇಲ್ಲಿದೆ ಮಾಹಿತಿ

WhatsApp
Telegram
Facebook
Twitter
LinkedIn

ಬೆಂಗಳೂರು : 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-1ಕ್ಕೆ ಹಾಜರಾತಿ ಕೊರತೆಯಿಂದ ಹೊರಗುಳಿದವರು, ಅನುತ್ತೀರ್ಣರಾದವರು ಅಥವಾ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಮಂಡಳಿಯು ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.ಪರೀಕ್ಷೆ-1ರಲ್ಲಿ ವಿವಿಧ ಕಾರಣಗಳಿಂದ ವಂಚಿತರಾದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಅವಕಾಶ ನೀಡಲಾಗಿದ್ದು, ಅರ್ಹ ವಿದ್ಯಾರ್ಥಿಗಳು ನಿಗದಿತ ಸಮಯದೊಳಗೆ ತಮ್ಮ ಶಾಲೆಯ ಮುಖ್ಯಸ್ಥರ ಮೂಲಕ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ಪ್ರಮುಖ ದಿನಾಂಕಗಳು:

ಆನ್‌ಲೈನ್ ಮೂಲಕ ಮಾಹಿತಿ ಅಪ್‌ಲೋಡ್ ಮಾಡಲು ಆರಂಭಿಕ ದಿನಾಂಕ: 24.04.2026

ಮಾಹಿತಿ ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ: 30.04.2026

ಚಲನ್ ಮುದ್ರಿಸಿಕೊಳ್ಳಲು ನಿಗದಿಪಡಿಸಿದ ದಿನಾಂಕ: 02.05.2026

ಬ್ಯಾಂಕ್‌ಗೆ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 04.05.2026

ಶುಲ್ಕದ ವಿವರಗಳು:

ಹಾಜರಾತಿ ಕೊರತೆಯಿಂದ ಪರೀಕ್ಷೆ-1 ತಪ್ಪಿಸಿಕೊಂಡವರಿಗೆ (CCPF): ₹248/- (ಪರೀಕ್ಷೆ ಶುಲ್ಕ ಈಗಾಗಲೇ ಪಾವತಿಸಿದ್ದರೆ ಕೇವಲ ನೋಂದಣಿ ಶುಲ್ಕ ಮಾತ್ರ).

ಫಲಿತಾಂಶ ಉತ್ತಮಪಡಿಸಿಕೊಳ್ಳುವ / ಪುನರಾವರ್ತಿತ ಅಭ್ಯರ್ಥಿಗಳಿಗೆ:

ಒಂದು ವಿಷಯಕ್ಕೆ: ₹448/-

ಎರಡು ವಿಷಯಗಳಿಗೆ: ₹559/-

ಮೂರು ಅಥವಾ ಹೆಚ್ಚಿನ ವಿಷಯಗಳಿಗೆ: ₹752/-

ವಿನಾಯಿತಿ: ಎಸ್‌ಸಿ/ಎಸ್‌ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಯಾರಿಗೆ ಅವಕಾಶ ?

ಹಾಜರಾತಿ ಕೊರತೆ: ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು, ಶೇ. 75ರಷ್ಟು ಹಾಜರಾತಿ ಇಲ್ಲದ ಕಾರಣ ಮುಖ್ಯ ಶಿಕ್ಷಕರಿಂದ ರದ್ದುಗೊಂಡ ವಿದ್ಯಾರ್ಥಿಗಳು ಖಾಸಗಿ ಅಭ್ಯರ್ಥಿಗಳಾಗಿ (CCPF) ಪರೀಕ್ಷೆ ಬರೆಯಬಹುದು.

ಅನುತ್ತೀರ್ಣರಾದವರು: ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ (Not Completed) ವಿದ್ಯಾರ್ಥಿಗಳು.

ಫಲಿತಾಂಶ ಸುಧಾರಣೆ: ಈಗಾಗಲೇ ಉತ್ತೀರ್ಣರಾಗಿದ್ದು, ಹೆಚ್ಚು ಅಂಕ ಗಳಿಸಲು ಬಯಸುವ ಅಭ್ಯರ್ಥಿಗಳು.

ವಯೋಮಿತಿ: 15 ವರ್ಷ ಪೂರೈಸಿದ ಹೊಸ ಖಾಸಗಿ ಅಭ್ಯರ್ಥಿಗಳು.

ಗಮನಿಸಬೇಕಾದ ಅಂಶಗಳು:

ನೋಂದಣಿಯನ್ನು ಶಾಲಾ ಲಾಗಿನ್ ಮೂಲಕವೇ (https://kseab.karnataka.gov.in) ಮಾಡಬೇಕಾಗುತ್ತದೆ.

ಅಂತಿಮ ದಿನಾಂಕದ ನಂತರ ಯಾವುದೇ ಕಾರಣಕ್ಕೂ ನೋಂದಣಿಗೆ ಅವಕಾಶವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ಸಹಾಯವಾಣಿ ಸಂಖ್ಯೆಗಳು: 080-23310075, 23310076 ಅನ್ನು ಸಂಪರ್ಕಿಸಬಹುದು.

ಸಾರಾಂಶ: ಪರೀಕ್ಷೆ-1ರಲ್ಲಿ ವಿವಿಧ ಕಾರಣಗಳಿಂದ ವಂಚಿತರಾದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಅವಕಾಶ ನೀಡಲಾಗಿದ್ದು, ಅರ್ಹ ವಿದ್ಯಾರ್ಥಿಗಳು ನಿಗದಿತ ಸಮಯದೊಳಗೆ ತಮ್ಮ ಶಾಲೆಯ ಮುಖ್ಯಸ್ಥರ ಮೂಲಕ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon