ವಿಜಯಪುರ: ನಿನ್ನೆ ತಡೆರಾತ್ರಿ ಸುರಿದ ಮಳೆಗೆ ಮನೆ ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಜಿಲ್ಲೆಯ ಆಲಮೇಲ ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿನಡೆದಿದೆ.
ಗುರುವಾರ ತಡ ರಾತ್ರಿ 2ಕ್ಕೆ ಬಿರುಗಾಳಿ, ಮಳೆಗೆ ಮನೆ ಚಾವಣಿ ಕುಸಿದು ಬಿದ್ದಿದ್ದು, ಅದರೊಳಗೆ ಒಂದೇ ಕುಟುಂಬದ ನಾಲ್ವರು ಸಿಲುಕಿಕೊಂಡಿದ್ದಾರೆ.
ದಂಪತಿಗಳಾದ ಗುರುರಾಜ ಬಡಿಗೇರ(36), ಜ್ಯೋತಿ ಬಡಿಗೇರ(28) ಹಾಗೂ ಅವರ ಮಕ್ಕಳಾದ ಕಾಳಮ್ಮ ಬಡಿಗೇರ(12), ಕೀರ್ತಿ ಬಡಿಗೇರ(6) ಅವರ ರಕ್ಷಣೆಗೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

































