ಚಿತ್ರದುರ್ಗ: ಹಿರಿಯೂರು ಉಪವಿಭಾಗ ವ್ಯಾಪ್ತಿಯ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಮೊದಲ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇದೇ ಜೂನ್ 23ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.
ಹಿರಿಯೂರು ಉಪವಿಭಾಗದ ದಿಂಡಾವರ, ಕೆ.ಆರ್.ಹಳ್ಳಿ, ಭರಮಗಿರಿ, ಐಮಂಗಲ ಹಾಗೂ ಮಲ್ಲಪ್ಪನಹಳ್ಳಿಯ 66/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ. ಇದರಿಂದಾಗಿ ಸೂರಪ್ಪನಹಟ್ಟಿ, ದಿಂಡಾವರ, ಕೆ.ಆರ್.ಹಳ್ಳಿ, ಬೋರನಕುಂಟೆ, ಯರೆಚಿಕ್ಕೇನಹಳ್ಳಿ, ಕುರುಬರಹಳ್ಳಿ, ಅಮ್ಮನಹಟ್ಟಿ, ವಿ.ವಿ.ಪುರ, ತಳವಾರಹಟ್ಟಿ, ಬೆಳಗಟ್ಟ, ಕೂನಿಕೆರೆ ಕಾವಲ್, ಎರಕೆನಾಗೇನಹಳ್ಳಿ, ಮೇಕೇನಹಳ್ಳಿ, ಕಕ್ಕಯ್ಯನಹಟ್ಟಿ, ಅಗಳೇರಹಟ್ಟಿ, ಕುಂಟಪ್ಪನಹಟ್ಟಿ, ಮೇಟಿಕುರ್ಕೆ, ಸೂರಗೊಂಡನಹಳ್ಳಿ, ಗುಯಿಲಾಳು, ಕಲ್ಲಹಟ್ಟಿ, ಭರಂಪುರ, ಕೆ.ಸಿ.ರೊಪ್ಪ, ಮರಡಿಹಳ್ಳಿ, ಐಮಂಗಲ, ಸಿ.ಎಸ್.ಹಳ್ಳಿ, ವದ್ದಿಕೆರೆ, ಮರಡಿದೇವಿಗೆರೆ, ದಾಸನಣ್ಣಮಾಳಿಗೆ, ಹುಲಿತೋಟ್ಟಿಲು, ತಾವಂದಿ, ಹರ್ತಿಕೋಟೆ, ಮಲ್ಲಪ್ಪನಹಳ್ಳಿ, ಗನ್ನಾಯಕನಹಳ್ಳಿ, ಕಳವಿಬಾಗಿ, ಕೋವೇರಹಟ್ಟಿ, ಹೊಸನಾಯಕರಹಟ್ಟಿ, ಸೋಂಡೆಕೆರೆ, ಯರಬಳ್ಳಿ, ಗೊಲ್ಲಹಳ್ಳಿ, ಎಂ.ಡಿ.ಕೋಟೆ, ಬುರುಜಿನರೊಪ್ಪ, ಪಾಲವ್ವನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಗ್ರಾಹಕರು, ರೈತರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಹಿರಿಯೂರು ಬೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಪೀರ್ ಸಾಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

































