ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಅರಿಯದವಂಗೆ ಅರಿದಿಹೆನೆಂಬ ಬಯಲರೋಗ ಹುಟ್ಟಿ,
ಕಾಲುಗೆಟ್ಟು ದೃಷ್ಟಿ ನಷ್ಟವಾಗುತ್ತಿದೆ ನೋಡಾ !
ಅದಕ್ಕೆ ನಾನೊಂದ ಮದ್ದ ಕಂಡೆ. ಹೆಸರಿಲ್ಲದ ಗಿಡ, ಮೂಲವಿಲ್ಲದ ಬೇರು.
ಎಲೆ ಹೂ ನಷ್ಟವಾದ ಚಿಗುರಿನ ಕುಲಗೆಟ್ಟು,
ಸಹಮೂಲಮಂ ತಂದು, ಆ ಕಲ್ಲಿನಲ್ಲಿ ಇಕ್ಕಿ ನೀರನೆರೆದು,
ಆ ಗುಂಡಿನಲ್ಲಿ ಹಾಗರೆಯಲಾಗಿ, ತಟ್ಟೆಯಲ್ಲಿ ಇಕ್ಕುವದಕ್ಕೆ ಮೊದಲೆ,
ಮದ್ದಿನ ದೃಷ್ಟ ನಷ್ಟವಾಯಿತ್ತು ,ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ.
-ವೈದ್ಯ ಸಂಗಣ್ಣ
































