ಬಳ್ಳಾರಿ: ಈರಣ್ಣ ಎಂಬುವವರಿಗೆ ಸೇರಿದ ಹೋಟೆಲ್ ನಲ್ಲಿ ತಡರಾತ್ರಿಯಲ್ಲಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡು ಹೋಟೆಲ್ ಹೊತ್ತಿ ಉರಿದಿದೆ. ಹೋಟೆಲ್ ನಲ್ಲಿ ಮಲಗಿದ್ದ ೯ ಜನರ ಪೈಕೊ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ.
ಗಾಯಾಳು ಬಾಲಕನನ್ನು ಶ್ರೀನಿವಾಸ್ (10) ಎಂದು ಗುರುತಿಸಲಾಗಿದೆ. ಬಾಲಕನನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಹೋಟೆಲ್ ನಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ. ಘಟನೆ ಸಂಬಂಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
































