‘ಸಾವರ್ಕರ್ ಪೋಟೋ ಮುಟ್ಟಲಿ ನೋಡೊಣ,ಅಂದೇ ರಾಜ್ಯದಲ್ಲಿ ಸರ್ಕಾರ ಇರುವುದಿಲ್ಲ’- ಈಶ್ವರಪ್ಪ

WhatsApp
Telegram
Facebook
Twitter
LinkedIn

ಶಿವಮೊಗ್ಗ:ಸಾವರ್ಕರ್ ಪೋಟೋ ಮುಟ್ಟಲಿ ನೋಡೊಣ.ಅಂದೇ ರಾಜ್ಯದಲ್ಲಿ ಈ ಸರ್ಕಾರ ಇರುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಫೋಟೊ ಹಾಕಿದಾಗ ಬಾಯಿಯಲ್ಲಿ ಮಣ್ಣು ಹಾಕಿಕೊಂಡಿದ್ದರೋ, ಸ್ವಾತಂತ್ರ ಹೋರಾಟಗಾರರಿಗೂ ಪ್ರಿಯಾಂಕ್ ಖರ್ಗೆಗೂ ಏನು ಸಂಬಂಧ ?ಹುಚ್ಚುಚ್ಚಾಗಿ ಮಾತನಾಡುವನ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೀರ ಸಾವರ್ಕರ್ ರಕ್ತ ಹಂಚಿಕೊಂಡ ನಾವು ಗೆಲ್ಲುತ್ತೇವೆಯೋ ಅಥವಾ ಮೊಹಮ್ಮದ್ಅಲಿ ರಕ್ತ ಹಂಚಿಕೊಂಡ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಗೆಲ್ಲುತ್ತಾರೆಯೇ ನೋಡೊಣ ಎಂದು ಸವಾಲೆಸೆದರು.

ವಿಶೇಷ ಸ್ಥಾನಮಾನ ರದ್ದಾಗಿರುವುದು ಸಂತಸದ ವಿಷಯ. ಆದರೆ ಕೆಲ ಕಾಂಗ್ರೆಸ್ಸಿಗರು ಇದನ್ನು ವಿರೋಧಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಜಮ್ಮು-ಕಾಶ್ಮೀ ರದ ಜನತೆ ಸ್ವಾಗತಿಸಿ ಸಂಭ್ರಮಾಚರಣೆ ನಡೆಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಗೂಂಡಾ ಮತ್ತು ಕೊಲೆಗುಡುಕರ ರಾಜ್ಯವಾಗಲು ಕಾಂಗ್ರೆಸ್ ಕಾರಣ. ಆದರೆ ಇದಕ್ಕೆ ಬಿಜೆಪಿ ಹೆದರುವುದಿಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಆಡಳಿತನಡೆಸುವ ಕಾಲ ಮುಗಿಯಲಿದೆ. ಪೇ ಸಿಎಂ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ಸಿಗರಿಗೆ ಪೇ ಡಿಸಿಎಂ ಎಂದು ಹೇಳಿದರೆ ತಡೆದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ಗೂಂಡಾಗಳನ್ನು ಬಗ್ಗು ಬಡಿಯಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon