Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಫೈನಲ್ ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ

0

ಬುಡಾಪೆಸ್ಟ್: ಹಂಗೇರಿಯ ಬುಡಾಪೆಸ್ಟ್ ನಲ್ಲಿ ಶುಕ್ರವಾರ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ ನಲ್ಲಿ ಫೈನಲ್ ಪ್ರವೇಶಿಸಿರುವ ನೀರಜ್, ಒಲಿಂಪಿಕ್ ಅರ್ಹತೆಯನ್ನೂ ಗಿಟ್ಟಿಸಿಕೊಂಡರು.

ನೀರಜ್ ಚೋಪ್ರಾ ಎ ಗುಂಪಿನ ಅರ್ಹತೆಯಲ್ಲಿ ಅಗ್ರಸ್ಥಾನ ಪಡೆದರು. ಫೈನಲ್ ಗೆ ನೇರ ಅರ್ಹತೆ ಪಡೆಯಲು ಅವರು 83 ಮೀಟರ್ ಜಾವೆಲಿನ್ ಎಸೆಯಬೇಕಿತ್ತು. ಆದರೆ ನೀರಜ್ ಚೋಪ್ರಾ ಅವರು ಮೊದಲ ಪ್ರಯತ್ನದಲ್ಲೇ 88.77 ಮೀಟರ್ ಜಾವೆಲಿನ್ ಎಸೆದರು. ಈ ಮೂಲಕ 83 ಮೀಟರ್‌ಗಳ ಅರ್ಹತಾ ಮಾರ್ಕ್ ದಾಟಿದ ಏಕೈಕ ಎಸೆತಗಾರದರು.

12 ಜನರು ಫೈನಲ್‌ ನಲ್ಲಿ ಸ್ಪರ್ಧಿಸಲಿದ್ದು, ಫೈನಲ್ ಪಂದ್ಯ ಭಾನುವಾರ ನಿಗದಿಪಡಿಸಲಾಗಿದೆ.

Leave A Reply

Your email address will not be published.