‘ರಾಜ್ಯದಲ್ಲಿ ಮಳೆಯಾಗಿ, ರೈತರು ಬೆಳೆದ ಬೆಳೆಗಳು ಉಳಿಯುವಂತಾಗಲಿ’ – ಸಿಎಂ ಶುಭಹಾರೈಕೆ

ಮೈಸೂರು: ಕನ್ನಡ ನಾಡಿನ ಜನರಿಗೆ ದಸರಾ ಮಹೋತ್ಸವ ವಿಜಯದಶಮಿಯ ಶುಭಾಶಯಗಳನ್ನು ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮಳೆ ಬೆಳೆಯಾಗಿ, ರಾಜ್ಯ ಸುಭೀಕ್ಷವಾಗಲಿ ಎಂದು ಚಾಮುಂಡೇಶ್ವರಿ ತಾಯಿಯನ್ನು ಪ್ರಾರ್ಥಿಸುವುದಾಗಿ ತಿಳಿಸಿದರು.

ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ವಿಜಯದಶಮಿ ಹಬ್ಬ. ಮಧ್ಯಾಹ್ನ ನಂದಿಧ್ವಜ ಪೂಜೆ ನೆರವೇರಿಸಿ, ನಂತರ ಜಂಬೂಸವಾರಿಯ ಅಂಬಾರಿ ಮೆರವಣಿಗೆ ಪ್ರಾರಂಭವಾಗಲಿದೆ. ಮೆರವಣಿಗೆ ಬನ್ನಿಮಂಟಪಕ್ಕೆ ತಲುಪಿದ ನಂತರ ಪಂಜಿನ ಮೆರವಣಿಗೆ ರಾತ್ರಿ 8 ರವರೆಗೆ ನಡೆಯಲಿದೆ ಎಂದರು.

ಇನ್ನು ಮಳೆಯ ಅಭಾವ, ವಿದ್ಯುತ್ ಕೊರತೆಯಿಂದ ರೈತರಿಗೆ ತೊಂದರೆಯಾಗಿದೆ. ರಾಜ್ಯದಲ್ಲಿ ಮಳೆಯಾಗಿ, ರೈತರು ಬೆಳೆದ ಬೆಳೆಗಳು ಉಳಿಯುವಂತಾಗಲಿ ಎಂದು ಹಾರೈಸಿದರು.

Advertisement

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement