ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಬಲ್ಲವನ ಭಾವ ಶರೀರದ ಹಂಗನರಿಯಬೇಕು.
ಸಂಚಿತದಲ್ಲಿ ತೋರುವ ಸಂಕಲ್ಪ,
ಆಗಾಮಿಯಲ್ಲಿ ತೋರುವ ಸುಖಭೋಗ,
ಪ್ರಾರಬ್ಧದಲ್ಲಿ ತೋರುವ ಆಸುರ ಕರ್ಮ ಪ್ರಾಪ್ತಿ.
ಇಂತಿವ ನೇತಿಗಳೆದು ನಿರ್ಲೇಪನಾಗಿರು.
ಯೋಗ ಭೋಗ ತ್ಯಾಗ ಇಂತೀ ತ್ರಿಗುಣದಲ್ಲಿ
ಲೇಪವಾಗದೆ ಅರಿ,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ.
-ಮನುಮುನಿ ಗುಮ್ಮಟದೇವ
































