ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಅಭಿಪ್ರಾಯ ಹಂಚಿಕೊಳ್ಳಿ.
ವಚನ:
ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ ?
ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ ?
ಕ್ಷುತ್ತು ನಿವೃತ್ತಿಯಾದವಂಗೆ ಕಟ್ಟೋಗರದ ಹೊರೆಯ ಹೊರಲೇತಕ್ಕೆ ?
ನಿತ್ಯ ಅನಿತ್ಯವ ತಿಳಿದು, ಮತ್ರ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ.
ನಿಶ್ಚಯವ ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿಂದಲ್ಲಿ,
ಆ ಬಚ್ಚಬಯಲ ಬೆಳಗ ನಿನ್ನ ನೀನೆ ನೋಡಿಕೊ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
-ಮೋಳಿಗೆ ಮಹಾದೇವಿ