ಮಂಗಳೂರು : ಬಜರಂಗದಳ ಕಾರ್ಯಕರ್ತರನ್ನು ಗಡಿಪಾರು ಆದೇಶದ ವಿಚಾರವಾಗಿ ಕೆಂಡಾಮಂಡಲವಾಗಿರುವ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ತಾಕತ್ತಿದ್ರೆ ಜಮೀರ್ ಅಹ್ಮದ್ ಖಾನ್‌ನನ್ನು ಗಡಿಪಾರು ಮಾಡಬೇಕು. ಇಲ್ಲೆಲ್ಲೂ ಅಲ್ಲ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು. ನಿಮಗೆ ತಾಕತ್ತಿದೆಯಾ ಎಸ್ಪಿ ಸಾಹೇಬ್ರೆ ಎಂದು ಪೊಲೀಸ್ ಇಲಾಖೆಗೆ ಸವಾಲೆಸೆದಿದ್ದಾರೆ. ಏಕವಚನದಲ್ಲಿಯೇ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ರನ್ನು ಸಂಬೋಧಿಸಿರುವ ಸ್ವಾಮೀಜಿ, ಗಡಿಪಾರಾದ ಬಜರಂಗದಳದ ಕಾರ್ಯಕರ್ತರ ಪರ ಬ್ಯಾಟಿಂಗ್ ಮಾಡಿದ್ದಾರೆ. ನಿಮಗೆ ಸ್ವಲ್ಪವಾದರೂ ಕಾನೂನಿನ ಅರಿವಿದ್ದರೆ ಅನಾಮತ್ತಾಗಿ ಬಂದವ ವಕ್ಫ್ ಬೋರ್ಡ್ ಸಚಿವ ಜಮೀರ್ ನನ್ನು ಮೊದಲು ಗಡಿಪಾರು ಮಾಡಿ. ಹಿಂದೂ ಕಾರ್ಯಕರ್ತರ ಮೇಲೆ ಯಾವುದಕ್ಕೋಸ್ಕರ ಕೇಸ್ ಹಾಕೊಂಡಿದ್ದಾರೆಂದು ಅವಲೋಕನ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋವುಗಳನ್ನು ರಕ್ಷಣೆ ಮಾಡಿ 10-20 ಕೇಸ್ ಬಿದ್ದಿದೆ. ಜಿಲ್ಲಾಡಳಿತಕ್ಕೆ ತಾಕತ್ತಿದ್ರೆ ನನ್ನನ್ನು ಗಡಿಪಾರು ಮಾಡಲಿ. ಸರ್ಕಾರಕ್ಕೆ ನಮ್ಮ ಮಕ್ಕಳನ್ನು ಕಂಡರೆ ಭಯ. ಹಿಂದೂ ಕಾರ್ಯಕರ್ತ ಲತೇಶ್ ನನ್ನು ಗಡಿಪಾರು ಮಾಡಬಹುದು. ಆದರೆ, ಲತೇಶ್ ನಂತಹ ಸಾವಿರಾರು ಯುವಕರು ಹುಟ್ಟಿದ್ರೆ ಮುಂದಿನ ದಿನಗಳು ನಿಮಗೆ ಕಷ್ಟವಾಗಬಹುದು ಎಂದು ಸುಳ್ಯದ ಕಾರ್ಯಕ್ರಮವೊಂದರಲ್ಲಿ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.
[vc_row][vc_column]
BREAKING NEWS
- ಮದುವೆಯಲ್ಲಿ ಕೈತಪ್ಪಿ ಅತಿಥಿಗಳ ಮೇಲೆ ಬಿದ್ದ ಮುಸುರೆ ತಟ್ಟೆಗಳು – ವೇಟರ್ನನ್ನು ಕೊಂದು, ಪೊದೆಗೆ ಎಸೆದ ಪಾಪಿಗಳು ಅರೆಸ್ಟ್
- ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಸುದ್ದಿಗೋಷ್ಠಿಗೂ ಮುನ್ನ ಪೊಲೀಸ್ ವಶಕ್ಕೆ
- ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿದ ಗಾರ್ಬಾ ನೃತ್ಯ
- ‘ಗೊಡ್ಡು ಬೆದರಿಕೆಗಳಿಗೆ ಹೆದರುವ ಪಕ್ಷ ಬಿಜೆಪಿ ಅಲ್ಲ’- ಬಿ.ವೈ.ವಿಜಯೇಂದ್ರ
- ಲಾರಿ – ಟಾಟಾ ಏಸ್ ನಡುವೆ ಭೀಕರ ಅಪಘಾತ-ನಾಲ್ವರು ಸಾವು
- ಜೈನಮುನಿ ಹತ್ಯೆ ಪ್ರಕರಣ-500ಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆ
- ದೈವಾರಾಧನೆ ನಮ್ಮ ನೆಲದ ಸಂಸ್ಕೃತಿ ಅದಕ್ಕೆ ಅವಮಾನ ಮಾಡಬೇಡಿ –ರಿಷಬ್ ಶೆಟ್ಟಿ
- ವರದಕ್ಷಿಣೆ ದಾಹಕ್ಕೆ ಬಲಿಯಾದರೆ ಯುವ ವ್ಯದ್ಯೆ ?
- ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ..? ಡೂಪ್ಲಿಕೇಟ್ ಕಾರ್ಡ್ ಪಡೆಯಲು ಹೀಗೆ ಮಾಡಿ
- ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್ 9ರಂದು ದೇವರ ದರ್ಶನ ಸಮಯದಲ್ಲಿ ಬದಲಾವಣೆ