Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಮನೆಯಲ್ಲಿ ಮಾಡಿ ಸವಿಯಿರಿ ಸ್ಪೆಷಲ್ ಚಿಕನ್ ಮಸಾಲ – ಮಾಡುವ ವಿಧಾನ ಇಲ್ಲಿದೆ ನೋಡಿ..

0

ಚಿಕನ್ ಕರಿಯನ್ನು ನಾವು ಬೇರೆ ಬೇರೆ ಸ್ಟೈಲ್‍ನಲ್ಲಿ ತಯಾರಿಸಿ ಸೇವಿಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಮಾಂಸದ ಅಡುಗೆ ಸಖತ್ ಸರಳವಾಗಿದೆ ಮತ್ತು ಅಷ್ಟೇ ರುಚಿಯಾಗಿಯೂ ಇರುತ್ತದೆ. ಖಾರವಾದ ಅಡುಗೆ ಇಷ್ಟ ಪಡುವವರಿಗೆ ಈ ರೆಸಿಪಿ ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ.

ಈ ಕರಿಯನ್ನು ಚಪಾತಿ, ಅನ್ನ ಹಾಗೂ ರಾಗಿ ಮುದ್ದೆಯೊಂದಿಗೂ ಸವಿಯಬಹುದು. ನೀವು ಮನೆಯಲ್ಲಿ ಸುಲಭ ಹಾಗೂ ಸರಳ ವಿಧಾನದಲ್ಲಿ ಮಾಡಲು ಬೇಕಾಗುವ ಸಾಮಗ್ರಿಗಳ ಪಟ್ಟಿಯೊಂದಿಗೆ ಮಾಡುವ ವಿಧಾನ ಈ ಕೆಳಗಿನಂತಿದೆ.

ಮಾಡುವ ವಿಧಾನ:

  • ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಬಳಸದೆ ಕಾಳು ಮೆಣಸು, ಲವಂಗ, ದಾಲ್ಚಿನ್ನಿ ಸೇರಿಸಿ ಹುರಿದುಕೊಳ್ಳಬೇಕು. ಸಂಪೂರ್ಣವಾಗಿ ಆರಿದ ಬಳಿಕ ಮಿಕ್ಸರ್ ಪಾತ್ರೆಗೆ ಸೇರಿಸಿ ರುಬ್ಬಿಕೊಳ್ಳಬೇಕು.
  • ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.
  • ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು, ಈರುಳ್ಳಿ ಮಿಶ್ರಣಕ್ಕೆ ಸೇರಿಸಿ. ಸ್ವಲ್ಪ ಉಪ್ಪನ್ನು ಸೇರಿಸಿ, 15 ನಿಮಿಷಗಳ ಕಾಲ ಬೇಯಿಸಬೇಕು.
  • ಪ್ರತ್ಯೇಕ ಬಾಣಲೆಯಲ್ಲಿ ಎಣ್ಣೆ, ಈರುಳ್ಳಿ, ತೆಂಗಿನ ತುರಿ, ಜೀರಿಗೆ ಉಳಿದ ಮಸಾಲೆ ಸಾಮಾಗ್ರಿಯನ್ನು ಸೇರಿಸಿ ಸ್ವಲ್ಪ ಬೇಯುವವರೆಗೆ ಹುರಿಯಬೇಕು.
  • ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆಯೇ 2 ನಿಮಿಷಗಳ ಕಾಲ ಹಿರಿಯಿರಿ. ನಂತರ ದಾಲ್ಚಿನ್ನಿ ಮತ್ತು ಲವಂಗದೊಂದಿಗೆ ಮಿಕ್ಸರ್ ಪಾತ್ರೆಗೆ ಸೇರಿಸಿ, ಪುಡಿ ಮಾಡಬೇಕು.
  • ನಂತರ ಕೋಳಿ ಮಾಂಸ ಇರುವ ಪಾತ್ರೆಗೆ ಈ ಮೊದಲೆ ತಯಾರಿಸಿದ ರುಬ್ಬಿದ ಮಸಾಲೆ, ಮತ್ತು ಹುರಿದಿಟ್ಟ ಇರುಳ್ಳಿ, ಅರಿಶಿಣ, ಏಲಕ್ಕಿ, ಕೆಂಪುಮೆಣಸು ಕೊತ್ತಂಬರಿ ಸೇರಿಸಿ ಚೆನ್ನಾಗಿ ಬೇಯಿಸಿದರೆ ಚಿಕನ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.
Leave A Reply

Your email address will not be published.