Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಹೊಸಪೇಟೆ: ನಾಳೆ ಈ ಭಾಗಗಳಲ್ಲಿ ಕರೆಂಟ್ ಇರಲ್ಲ

0

 

ಹೊಸಪೇಟೆ : ಜೆಸ್ಕಾಂ ನಗರ ವಿಭಾಗದ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಮತ್ತು ಇತರೆ ದುರಸ್ತಿ ಕಾರ್ಯ ಕೈಗೊಳ್ಳುವ ಕಾರಣ ಸೆ.13 ಬುಧವಾರ ಬೆಳಿಗ್ಗೆ 9 ರಿಂದ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರದೇಶಗಳು:

ಬಸವೇಶ್ವರ ಬಡಾವಣೆ, ಜಬ್ಬಲ್ ಸರ್ಕಲ್, ಪುನೀತ್ ರಾಜ್‌ಕುಮಾರ್ ವೃತ್ತ, ರಾಜೀವ ನಗರ, ರೈಲ್ವೆ ಸ್ಟೆಷನ್, ಅಮರಾವತಿ, ಚಿತ್ತಿವಾಡ್ಗಿ, ಶುಗರ್ ಫ್ಯಾಕ್ಟರಿ, ಹಂಪಿ ರೋಡ್, ನೌಕರರ ಕಾಲೋನಿ, ಗಾಂಧಿ ಸರ್ಕಲ್, ಬಸ್ ನಿಲ್ದಾಣ, ಕೋರ್ಟ್, ರಾಣಿಪೇಟೆ, ಭಟ್ರಹಳ್ಳಿ, ಬೆನಕಾಪುರ, ಬಸವನದುರ್ಗ, ನಾಗೇನಹಳ್ಳಿ ಹಾಗೂ ನರಸಾಪುರ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Leave A Reply

Your email address will not be published.