ನವದೆಹಲಿ: ‘OMG 2’ 2023ರಲ್ಲಿ ಭಾರತದಲ್ಲಿ 100 ಕೋಟಿ ರೂಪಾಯಿಗೂ ಅಧಿಕ (ನಿವ್ವಳ ಕಲೆಕ್ಷನ್) ಗಳಿಸಿದ ಎಂಟನೇ ಬಾಲಿವುಡ್ ಚಲನಚಿತ್ರವಾಗಿದೆ. ‘ಪಠಾಣ್’ 2023ರಲ್ಲಿ ₹524.53 ಕೋಟಿ ರೂಪಾಯಿ (ನಿವ್ವಳ ಕಲೆಕ್ಷನ್)ನೊಂದಿಗೆ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿದೆ. ‘ಗದರ್ 2’, ‘ದಿ ಕೇರಳ ಸ್ಟೋರಿ’, ‘ಆದಿಪುರುಷ’, ‘ತು ಜೂಥಿ…’, ‘ರಾಕಿ ಔರ್ ರಾಣಿ…’ ಮತ್ತು ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾಗಳು 2023ರಲ್ಲಿ 100 ಕೋಟಿ ರೂಪಾಯಿ ದಾಟಿದ ಇತರ ಆರು ಚಿತ್ರಗಳಾಗಿವೆ.