ಭಾರತಕ್ಕೆ ಕಾಲಿಟ್ಟ WWE ಸ್ಟಾರ್ ಜಾನ್ ಸೀನಾ – ಸೀನಾ ಅವರನ್ನು ಭೇಟಿಯಾಗಿ ಸ್ವಾಗತಿಸಿದ ಟಾಲಿವುಡ್ ಸ್ಟಾರ್ ಕಾರ್ತಿ

ತೆಲುಗು ಚಿತ್ರನಟ ಕಾರ್ತಿ ಅವರು ಹೈದರಾಬಾದ್‌ ನಲ್ಲಿ ಡಬ್ಲ್ಯೂ ಡಬ್ಲ್ಯೂಇ ಸೂಪರ್‌ಸ್ಟಾರ್ ಮತ್ತು ಹಾಲಿವುಡ್ ನಟ ಜಾನ್ ಸೀನಾ ಅವರನ್ನು ಭೇಟಿ ಮಾಡಿದ್ದು ಅವರೊಂದಿಗೆ ತೆಗೆದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

17 ವರ್ಷಗಳ ಬಳಿಕ ಜಾನ್ ಸೀನಾ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, ಸದ್ಯ ಹೈದರಾಬಾದ್‌ನಲ್ಲಿರುವ ಅವರನ್ನು ತೆಲುಗು ನಟ ಕಾರ್ತಿ ಭಾರತಕ್ಕೆ ಸ್ವಾಗತಿಸಿದರು.

ಜಾನ್ ಸೀನಾ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿರುವ ಕಾರ್ತಿ ಕಪ್ಪು ಟಿ- ಶರ್ಟ್ ಮತ್ತು ಜರ್ಸಿಯನ್ನು ಧರಿಸಿದ್ದರೆ, ಜಾನ್ ಸೀನಾ ಬಿಳಿ ಟಿ-ಶರ್ಟ್ ಮತ್ತು ಕಪ್ಪು ಕ್ಯಾಪ್ ಧರಿಸಿದ್ದಾರೆ.

Advertisement

ಈ ಕುರಿತು ಕಾರ್ತಿ ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದು, ನಿಮ್ಮನ್ನು ಭೇಟಿಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕೆಲವು ನಿಮಿಷಗಳ ಭೇಟಿಯಲ್ಲಿ ನೀವು ಪ್ರತಿಯೊಬ್ಬರನ್ನು ಹೇಗೆ ವಿಶೇಷವಾಗಿಸಬಹುದು ಎಂಬುದು ನಿಮ್ಮ ಅದ್ಭುತ ಗುಣವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಇಬ್ಬರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದಾರೆ.

ಜಾನ್ ಸೀನಾ ಕಳೆದ ತಿಂಗಳು ಯಾವುದೇ ಶೀರ್ಷಿಕೆಯಿಲ್ಲದೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಿರಂಗದ ಚಿತ್ರವನ್ನು ಹಂಚಿಕೊಂಡಾಗ ಸುದ್ದಿಯಲ್ಲಿದ್ದರು. ಅವರ ಪೋಸ್ಟ್ ಚಂದ್ರಯಾನ-3 ರ ಲ್ಯಾಂಡಿಂಗ್‌ನೊಂದಿಗೆ ಹೊಂದಿಕೆಯಾದ ಕಾರಣ, ಅವರು ಭಾರತದ ಐತಿಹಾಸಿಕ ಸಾಧನೆಗೆ ಗೌರವ ಸಲ್ಲಿಸುತ್ತಿದ್ದಾರೆಯೇ ಎಂದು ಅನೇಕ ಬಳಕೆದಾರರು ಪ್ರಶ್ನಿಸಿದ್ದರು.

ಹೈದರಾಬಾದ್‌ನಲ್ಲಿ ನಡೆಯಲಿದ್ದ ಶೋ ಡಬ್ಲ್ಯೂ ಡಬ್ಲ್ಯೂಇ ಸ್ಪೆಕ್ಟಾಕಲ್ ಅನ್ನು ಪ್ರಚಾರ ಮಾಡಲು ಹೀಗೆ ಮಾಡಿರಬಹುದು ಎಂದು ಕೆಲವರು ಊಹೆ ಮಾಡಿದ್ದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement