ಲಕ್ನೋ: ಪ್ರಯಾಗರಾಜ್ದಲ್ಲಿ ನಡೆಯಲಿರುವ ಮಹಾಕುಂಭಮೇಳದ ಸಮಯದಲ್ಲಿ ಮುಸ್ಲಿಮರ ಸಾಮೂಹಿಕ ಮತಾಂತರ ನಡೆಯುತ್ತದೆ ಎಂದು ಹಿರಿಯ ಮೌಲ್ವಿಯೊಬ್ಬರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಪತ್ರ ಬರೆಯುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ
ಪ್ರಯಾಗರಾಜ್ದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. ಈ ವರ್ಷ ಜನವರಿ 13ರಿಂದ ಫೆಬ್ರವರಿ 26ರವರೆಗೆ ಕುಂಭಮೇಳ ಆಯೋಜಿಸಲಾಗಿದ್ದು, ಈ ಕುಂಭಮೇಳದಲ್ಲಿ ಸಾಮೂಹಿಕ ಮತಾಂತರದ ಆತಂಕವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ಜಿ ಬರೇಲ್ವಿ ಅವರು ಪತ್ರ ಬರೆದಿದ್ದಾರೆ. ಈ ಮುಂಚೆ ಮಹಾಕುಂಭದಲ್ಲಿ ಭಾಗಿಯಾಗದಂತೆ ಮುಸ್ಲಿಮರಿಗೆ ಸಲಹೆ ನೀಡಿದ್ದರು. ಇದೀಗ ಈಗ ಕುಂಭಮೇಳದ ಸಂದರ್ಭದಲ್ಲಿ ನೂರಾರು ಮುಸ್ಲಿಮರನ್ನು ಮತಾಂತರ ಮಾಡುವ ಯೋಜನೆಗಳನ್ನು ವಿಫಲಗೊಳಿಸಬೇಕು. ಜವಾಬ್ದಾರಿಯುತ ನಾಗರಿಕನಾಗಿ ಮುಖ್ಯಮಂತ್ರಿಗೆ ತಿಳಿಸಿದ್ದೇನೆ. ಮತಾಂತರದ ಬಗ್ಗೆ ನಂಬಲರ್ಹ ಮೂಲಗಳಿಂದ ತಮಗೆ ಮಾಹಿತಿ ಸಿಕ್ಕಿದೆ. ಈಗ ಅದನ್ನು ನಿಲ್ಲಿಸುವ ಹೊಣೆ ರಾಜ್ಯ ಸರ್ಕಾರದ್ದು ಎಂದಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಅಖಾರ ಪರಿಷತ್ ಮತ್ತು ನಾಗಾ ಸಾಧುಗಳು ಸಭೆ ನಡೆಸಿದ್ದು, ಕುಂಭಮೇಳದ ಸಂದರ್ಭ ಮುಸ್ಲಿಮರು ಅಂಗಡಿಗಳನ್ನು ಇಡುವುದನ್ನು ನಿಷೇಧಿಸುವ ಬಗ್ಗೆ ಮಾತನಾಡಿದ್ದಾರೆ. ಆದ್ದರಿಂದ ಯಾವುದೇ ತೊಂದರೆ ತಪ್ಪಿಸಲು ಮುಸ್ಲಿಮರಿಗೆ ಮಹಾಕುಂಭಕ್ಕೆ ಹೋಗದಂತೆ ನಾನು ಸಲಹೆ ನೀಡಿದ್ದೇನೆ ಎಂದೂ ಹೇಳಿದ್ದಾರೆ.
ಈ ಕುರಿತು ಜಮಿಯತ್ ಉಲಮಾ-ಎ-ಹಿಂದ್ನ ಉತ್ತರ ಪ್ರದೇಶ ಘಟಕದ ಕಾನೂನು ಸಲಹೆಗಾರ ಮೌಲಾನಾ ಕಾಬ್ ರಶೀದಿ ಮಾತನಾಡಿ, ಹಿಂದೂಗಳ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೂ ಮೊದಲು ಮುಸ್ಲಿಮರು ಚರ್ಚೆಯ ಕೇಂದ್ರವಾಗಿರುವುದು ಇದೇ ಮೊದಲು ಎಂದು ಹೇಳಿದರು.
ಕಳೆದ ವರ್ಷ ಅಖಿಲ ಭಾರತೀಯ ಅಖಾಡ ಪರಿಷತ್ತು, ಸನಾತನ ಧರ್ಮದ ನಿಜವಾದ ಅನುಯಾಯಿಗಳೆಂದು ಸಾಬೀತು ಮಾಡಲು ಹಿಂದೂಗಳ ಅಂಗಡಿಗಳಿಂದ ಮಾತ್ರ ಮಹಾಕುಂಭಕ್ಕಾಗಿ ಸರಕುಗಳನ್ನು ಖರೀದಿಸಿ ಎಂದು ಕರೆ


































