ಜೂ. 12ರಂದು ಅಹಮದಾಬಾದ್ನ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ಗೆ ಡಿಕ್ಕಿಯಾದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನದ ಅವಶೇಷಗಳನ್ನು ಗುಜರಾತ್ ಪೊಲೀಸರು (Gujarat Police) ನಗರದ ವಿಮಾನ ನಿಲ್ದಾಣದ ಸಮೀಪದ ಸ್ಥಳಕ್ಕೆ ಸ್ಥಳಾಂತರಿಸಲು ಆರಂಭಿಸಿದ್ದಾರೆ. ತನಿಖಾಧಿಕಾರಿಗಳು ಇಲ್ಲಿ ಅವಶೇಷಗಳನ್ನು ಜೋಡಿಸಿ ವಿಶ್ಲೇಷಣೆ ನಡೆಸಲಿದ್ದಾರೆ.
ಅಧಿಕಾರಿಗಳ ಪ್ರಕಾರ 120 ಟನ್ ತೂಕದ ವಿಮಾನದ ಸಂಪೂರ್ಣ ಅವಶೇಷವನ್ನು ಸ್ಥಳಾಂತರಿಸಲು 48ರಿಂದ 72 ಗಂಟೆಗಳ ಕಾಲ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ 33 ಸೆಕೆಂಡ್ಗಳಲ್ಲಿ ವಿಮಾನವು ಹಾಸ್ಟೆಲ್ಗೆ ಡಿಕ್ಕಿಯಾಗಿ ಪತನವಾಗಿದೆ. ಈ ದುರಂತದಲ್ಲಿ 241 ಪ್ರಯಾಣಿಕರ ಜತೆ 30 ಜನರು ಮೃತಪಟ್ಟಿದ್ದಾರೆ.