ಧರ್ಮಸ್ಥಳ: ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣ ತನಿಖೆಗೆ ಧರ್ಮಸ್ಥಳಕ್ಕೆ ಆಗಮಿಸಿದ ಎಸ್.ಐ.ಟಿ. ತಂಡದ ಅಧಿಕಾರಿ ಜಿತೇಂದ್ರ ದಯಾಮ ಠಾಣೆಯಿಂದ ಕೇಸ್ ಫೈಲ್ ಪಡೆಯಲು ಜುಲೈ 25ರಂದು ರಾತ್ರಿ ಆಗಮಿಸಿದರು.
ಮಂಗಳೂರಿನಲ್ಲಿ ಎಸ್.ಐ.ಟಿ.ತಂಡದಲ್ಲಿರುವ ಡಿಐಜಿ ಎಂ.ಎನ್. ಅನುಚೇತ್ ರವರು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಜಿತೇಂದ್ರರವರು ಧರ್ಮಸ್ಥಳ ಠಾಣೆಗೆ ಆಗಮಿಸಿದರು.ದಯಾಮ ಠಾಣೆಗೆ ಆಗಮಿಸಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಮರ್ಥ್ ಗಾಣಿಗೇರ್ ಅವರೊಂದಿಗೆ ಮಾತುಕತೆ ನಡೆಸಿದರು.
 
				 
         
         
         
															 
                     
                     
                    


































 
    
    
        