ಛತ್ತೀಸ್ಗಢ: ಛತ್ತೀಸ್ಗಢದ ಬಿಲಾಸ್ಪುರದ ಪೂರ್ವಾ ಅಗರ್ವಾಲ್ ಅವರೇ ಸಾಕ್ಷಿ. 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 65ನೇ ರ್ಯಾಂಕ್ ಪಡೆಯುವ ಮೂಲಕ, ಪೂರ್ವ ಅಗರ್ವಾಲ್ ಐಪಿಎಸ್ ಅಧಿಕಾರಿಯಿಂದ ಐಎಎಸ್ ಅಧಿಕಾರಿಯಾಗುವ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಪೂರ್ವಾ ಅವರು ಈ ಹಿಂದೆ 2023ರ ಯುಪಿಎಸ್ಸಿ ಪರೀಕ್ಷೆಯಲ್ಲಿ 189ನೇ ರ್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು ಮತ್ತು ಅವರಿಗೆ ಛತ್ತೀಸ್ಗಢ ಕೆಡರ್ ನಿಯೋಜಿಸಲಾಗಿತ್ತು. ಸತತ ಎರಡು ಪ್ರಯತ್ನಗಳಲ್ಲಿ ಯಶಸ್ವಿಯಾಗಿ ಯುಪಿಎಸ್ಸಿ ಪರೀಕ್ಷೆ ಉತ್ತೀರ್ಣರಾಗುವ ಮೂಲಕ ಇತರ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.
ತಮ್ಮ ಶೈಕ್ಷಣಿಕ ಜೀವನದ ಆರಂಭದಿಂದಲೂ ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲ ಹೊಂದಿದ್ದ ಪೂರ್ವಾ, ಯುಪಿಎಸ್ಸಿ ಸಿದ್ಧತೆಗಾಗಿ ವಾರ್ಷಿಕ 30 ಲಕ್ಷ ರೂಪಾಯಿ ವೇತನದ ಖಾಸಗಿ ಕೆಲಸವನ್ನು ತೊರೆದರು. ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದಾಗ ಅವರಿಗೆ ಸಂತೋಷವಾಗಿತ್ತಾದರೂ, ಜನಸೇವೆಯ ವ್ಯಾಪ್ತಿ ಹೆಚ್ಚಿರುವ ಐಎಎಸ್ ಹುದ್ದೆಯನ್ನು ಅಲಂಕರಿಸಬೇಕು ಎಂಬ ಹಂಬಲ ಅವರಲ್ಲಿತ್ತು. ಹೀಗಾಗಿ 2025ರಲ್ಲಿ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 65ನೇ ರ್ಯಾಂ ಕ್ ಪಡೆದು ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.
ಸಾಮಾನ್ಯ ಕುಟುಂಬದಿಂದ ಬಂದು, ಲಕ್ಷಾಂತರ ರೂಪಾಯಿ ಸಂಬಳದ ಕೆಲಸವನ್ನು ತ್ಯಜಿಸಿ, ಈಗ ಐಎಎಸ್ ಅಧಿಕಾರಿಯಾಗಿ ದೇಶದ ಸೇವೆಗೆ ಸಜ್ಜಾಗಿರುವ ಪೂರ್ವಾ ಅಗರ್ವಾಲ್ ಅವರ ಪಯಣ ಸಾವಿರಾರು ಆಕಾಂಕ್ಷಿಗಳಿಗೆ ನಿದರ್ಶನವಾಗಿದೆ.































