ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ,
ಇಂದುಕಾಂತದೊಳಗೆ ಬಿಂದುವಿದ್ದಿಲ್ಲದಂತೆ,
ದರ್ಪಣದೊಳಗಣ ಪ್ರತಿಬಿಂಬ ಮುಟ್ಟಿಯೂ ಮುಟ್ಟದಂತೆ,
ಸರ್ವಸಾಕ್ಷಿಕನಾದ ಸೌರಾಷ್ಟ್ರ ಸೋಮೇಶ್ವರನುಪಿಂಡದೊಳಗಡಗಿ ಇಲ್ಲದಂತಿಪ್ಪನಯ್ಯಾ.
-ಆದಯ್ಯ





























