ಚಿತ್ರದುರ್ಗ : ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ತುಂಬಾ ದೊಡ್ಡದಿದೆ, ಮನೆಯಲ್ಲಿ ಇರುವವರನೆಲ್ಲಾ ಸಭಾಳಿಸಿ ಅವರಿಗೆ ಬೇಕು ಬೇಡಗಳನ್ನು ಪೂರ್ಣ ಮಾಡುವುದರ ಮೂಲಕ ಎಲ್ಲರನ್ನು ಸಮಾನಾಗಿ ನೋಡಿ ಕೊಳ್ಳುವ ಗುಣ ಮಹಿಳೆಯರಲ್ಲಿ ಇದೆ ಎಂದು ಧರ್ಮಸ್ಥಳ ಗ್ರಾಮಾಭೀವೃದ್ದಿ ಬಿ.ಸಿ. ಟ್ರಸ್ಟ್ನ ಚಿತ್ರದುರ್ಗ ಜಿಲ್ಲೆಯ ನಿರ್ದೇಶಕರು ಕಮಲಾಕ್ಷ ತಿಳಿಸಿದರು.
ಸಿರಿಗೆರೆ ತಾಲೂಕಿನ ಹಿರೇಗುಂಟನೂರು ವಲಯದ ಬೆನಕನಹಳ್ಳಿ ಕಾರ್ಯಕ್ಷೇತ್ರದ ಒನಕೆ ಓಬವ್ವ ಜ್ಞಾನವಿಕಾಸ ಕೇಂದ್ರದಲ್ಲಿ ಗುರುವಾರ ನಡೆದ ಮಾಸಿಕ ಸಭೆಯಲ್ಲಿ ಟೈಲರಿಂಗ್ ತರಬೇತಿಯ ಸಮಾರೋಪ ಕಾರ್ಯಕ್ರಮ ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಕುಟುಂಬದಲ್ಲಿ ಪುರುಷನೊಬ್ಬನೇ ದುಡಿಮೆ ಮಾಡಿದರೆ ಕುಟುಂಬ ನಡೆಸಲು ಆಗುವುದಿಲ್ಲ ಈ ಹಿನ್ನಲೆಯಲ್ಲಿಮ ಮಹಿಳೆಯಾದವರು ಸಹಾ ಗಂಡನೊಂದಿಗೆ ಕೈ ಜೋಡಿಸಿದರೆ ಕುಟುಂಬ ಸರಿಯಾಗಿ ಸಾಗಲು ಅನುಕೂಲವಾಗುತ್ತದೆ, ಇದಕ್ಕೆ ಮನೆಯಲ್ಲಿಯೇ ಇದ್ದಕೊಂಡು ಮನೆಗೆಲಸವನ್ನು ಪೂರ್ಣ ಮಾಡಿ ತದ ನಂತರ ಬಿಡುವಿದ್ಧಾಗ ಈ ಟೈಲರಿಂಗ್ ಕೆಲಸವನ್ನು ಮಾಡುವುದರ ಮೂಲಕ ಆದಾಯವನ್ನು ಗಳಿಸಬಹುದಾಗಿದೆ, ಇಂದಿನ ದಿನದಲ್ಲಿ ಬಹುತೇಕ ಜನತೆ ಮನೆಯಲ್ಲಿ ಟೈಲರಿಂಗ್ ಮಾಡುವುದರ ಮುಲಕ ತಮ್ಮ ಕಟುಂಬವನ್ನು ಸಲಹುತ್ತಿದ್ದಾರೆ ಎಂದರು.
ಧರ್ಮಸ್ಥಳ ಗ್ರಾಮಾಭೀವೃದ್ದಿ ಬಿ.ಸಿ. ಟ್ರಸ್ಟ್ನ ಯೋಜನಾಧಿಕಾರಿ. ರವಿಚಂದ್ರ ಮಾತನಾಡಿ, ಇಂದಿನ ದಿನದಲ್ಲಿ ಪುರುಷನಷ್ಟೇ ಮಹಿಳೆಯು ಸಹಾ ದುಡಿಮೆಯನ್ನು ಮಾಡುತ್ತಿದ್ದಾಳೆ. ಅವರು ಸಹಾ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಂತೆ ಪುರುಷನಿಗೆ ಪೈಪೋಟಿಯನ್ನು ನೀಡುತ್ತಿದ್ದಾಳೆ, ಕಡಿಮೆ ಬಂಡವಾಳದಲ್ಲಿ ದುಡಿಮೆಯನ್ನು ಮಾಡುವುದೆಂದರೆ ಅದರು ಟೈಲರಿಂಗ ಕೆಲಸವಾಗಿದೆ ಇದನ್ನು ಕಲಿತವರು ಮನೆಯಲ್ಲಿಯೇ ಸ್ವಂತವಾಗಿ ಕೆಲಸವನ್ನು ಮಾಡಬಹುದೆ ಇಲ್ಲವಾದರೆ ಬೇರೆ ಕಡೆಯಲ್ಲಿ ಕೆಲಸವನ್ನು ಮಾಡುವುದರ ಮೂಲಕ ದುಡಿಮೆಯನ್ನು ಮಾಡಬಹುದಾಗಿದೆ. ಇದರಿಂದ ನಿಮ್ಮ ಕುಟುಂಬದ ಅರ್ಥಿಕ ಪ್ರಗತಿಯನ್ನು ಕಾಣ ಬಹುದಾಗಿದೆ ಎಂದ ಅವರು. ಸಮಾಜದಲ್ಲಿ ಮಹಿಳೆ ಯಾವ ರೀತಿ ಬದುಕು ನಡೆಸಬೇಕು ಹಾಗೂ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ್ದರು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದ್ಯಸರಾದ ರಾಜಪ್ಪ. ಒಕ್ಕೂಟ ಅಧ್ಯಕ್ಷರು ಕಮಲಮ್ಮ, ತರಬೇತಿ ಶಿಕ್ಷಕಿ ವಾಣಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿ ಉಪಸ್ಥಿತರಿದ್ದರು..
































