ಚಿತ್ರದುರ್ಗ: ಕಾಮಗಾರಿ ಹಂತದಲ್ಲಿ ಕುಂಠಿತವಾಗಿ ನಿಂತಿದ್ದAತಹ ಡಾ.ಬಾಬು ಜಗಜೀವನ್ ರಾಮ್ ಭವನಕ್ಕೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಮೀಪದಲ್ಲಿರುವಂತ ಡಾ. ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ (ಇತ್ತೀಚಿಗೆ) ಏಪ್ರಿಲ್ 15ರಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಭೇಟಿ ನೀಡಿ ಕುಂಠಿತವಾಗಿ ಬಿದ್ದಿದ್ದಂತ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಕುಂಠಿತವಾಗಿರುವAತ ಭವನದ ಇತರೆ ಕಾಮಗಾರಿಗೆ ಶೀಘ್ರದಲ್ಲಿ ಹಣ ಬಿಡುಗಡೆ ಮಾಡಲಾಗುವುದು, ಭವನದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಎಲ್ಲಾ ಸಮುದಾಯದವರಿಗೂ ಪ್ರತ್ಯೇಕವಾದ ಭವನಗಳು ಇವೆ. ಅದರಂತೆ ದಲಿತ ಸಮುದಾಯದವರಿಗೆ ಅವಶ್ಯಕವಾಗಿ ಬೇಕಾಗಿರುವ ಡಾ. ಬಾಬು ಜಗಜೀವನ್ ರಾಮ್ ಭವನ ಕಾಮಗಾರಿ ಅರ್ಧದಲ್ಲೇ ಕುಂಠಿತವಾಗಿರುವುದು ಬೇಸರದ ವಿಚಾರ ಶೀಘ್ರವೇ ಸಂಬAಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಇನ್ನುಳಿದ ಭವನದ ಕಾಮಗಾರಿಗೆ ಶಾಸಕರ ಅನುದಾನದಿಂದ ಹಣವನ್ನು ಬಿಡುಗಡೆ ಮಾಡಿ ಶೀಘ್ರವೇ ದಲಿತರ ಉದ್ದಾರಕ್ಕಾಗಿ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಎಂಟು ವರ್ಷಗಳಿಂದ ಪಾಳು ಬಿದ್ದಿರುವಂತ ಡಾ. ಬಾಬು ಜಗಜೀವನ್ ರಾಮ್ ಭವನದ ಕಾಮಗಾರಿಯನ್ನು ಮುಗಿಸಿ ದಲಿತರಿಗೆ ಹಸ್ತಾಂತರ ಮಾಡಬೇಕೆಂದು ದಲಿತ ಮುಖಂಡರಿAದ ಹಾಗೂ ಇತರೆ ಸಂಘ-ಸAಸ್ಥೆಗಳಿAದ ಅರ್ಜಿಗಳು ಸಹ ಬಂದಿದ್ದವು. ಅದರಂತೆ ಭವನವನ್ನ ಭೇಟಿ ಮಾಡಿದ್ದೇನೆ, ಭವನದ ಅರ್ಥದಷ್ಟು ಕೆಲಸಗಳು ಮುಗಿದಿವೆ ಆದರೆ ಭವನದ ಇನ್ನಷ್ಟು ಮುಖ್ಯವಾದ ಕೆಲಸಗಳು ಆಗಬೇಕಿದೆ ಅವುಗಳನ್ನು ತ್ವರಿತಗತಿಯಲ್ಲಿ ಕೆಲಸ ಮಾಡುವಂತಹ ಪ್ರಾಮಾಣಿಕವಾದ ಕೆಲಸವನ್ನ ಮಾಡುತ್ತೇನೆ. ದಲಿತ ಸಮುದಾಯಕ್ಕೆ ಅವಶ್ಯಕತೆ ಇರುವಂತ ಭವನವನ್ನ ಸಂಪೂರ್ಣವಾಗಿ ಕಾಮಗಾರಿಯನ್ನು ಮುಗಿಸಿ ಸಮುದಾಯದವರಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.
ಬಾಬು ಜಗಜೀವನ್ ರಾಮ್ ಸಮುದಾಯ ಭವನ 2018ರಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, 9 ಕೋಟಿ 90 ಲಕ್ಷ ವೆಚ್ಚದಲ್ಲಿ ಕಾಮಗಾರಿ ವೆಚ್ಚ ನಿರ್ಮಾಣವಾಗಬೇಕಾಗಿತ್ತು. ಆದರೆ ಭವನದ ಯೋಜನೆ ಬದಲಾವಣೆಯಾಗಿದ್ದರಿಂದ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸುವುದಕ್ಕೆ ಸಾಧ್ಯವಾಗಿಲ್ಲ ಹಾಗಾಗಿ ಇನ್ನಷ್ಟು ಹಣವನ್ನು ಭವನಕ್ಕೆ ಮೀಸಲಿಟ್ಟರೆ ಭವನವು ಸಂಪೂರ್ಣವಾಗಿ ಕಾಮಗಾರಿ ಮುಗಿಯುತ್ತದೆ ಎಂದು ಅಧಿಕಾರಿಗಳು ಶಾಸಕರಿಗೆ ಮನವಿ ಮಾಡಿದರು ಸ್ಥಳದಲ್ಲೇ ಶಾಸಕರು ಭವನವನ್ನ ಸಂಪೂರ್ಣವಾಗಿ ವೀಕ್ಷಿಸಿ, ಭವನಕ್ಕೆ ಬೇಕಾಗುವ ಎಲ್ಲಾ ಖರ್ಚು ವೆಚ್ಚವನ್ನ ಬಿಡುಗಡೆ ಮಾಡಲಾಗುವು ನಾಲ್ಕು ತಿಂಗಳೊಳಗೆ ಭವನದ ಎಲ್ಲಾ ಅಭಿವೃದ್ಧಿ ಕಾರ್ಯಗಳು ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸ್ಥಳದಲ್ಲಿ ಉತ್ತರಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಗ್ಯಾರಂಟಿ ಜಿಲ್ಲಾಧ್ಯಕ್ಷ ಶಿವಣ್ಣ, ಪಪ್ಪಿಸ್ ಸ್ಟೂಡೆಂಟ್ ವಿಂಗ್ ಅಧ್ಯಕ್ಷ ರವಿ ಚಿನ್ನು, ಕಾರ್ಯದರ್ಶಿ ಸಲೀಂ, ಪದಾಧಿಕಾಗಳಾದ ದರ್ಶನ್, ಹೇಮಂತ್ ಹಾಗೂ ದಲಿತ ಮುಖಂಡರು ಇದ್ದರು.

































