ಚಿತ್ರದುರ್ಗ : 2023-24ನೇ ಸಾಲಿನಲ್ಲಿ ಐಟಿಐ ಮತ್ತು ಪಿಯುಸಿ (ವಿಜ್ಞಾನ, ತಾಂತ್ರಿಕ ವಿಷಯಗಳು) ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 2ನೇ ವರ್ಷದ 3ನೇ ಸೆಮಿಸ್ಟರ್ ಡಿಪ್ಲೋಮಾಗೆ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಲಭ್ಯವಿರುವ ಸ್ಥಾನಗಳನ್ನು ಮೆರಿಟ್ ಆಧಾರದ ಮೇಲೆ ಆಫ್‍ಲೈನ್ ಮುಖಾಂತರ ಪ್ರವೇಶ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್ www.dtek.kar.nic.in ಮೂಲಕ ಡೌನ್‍ಲೋಡ್ ಮಾಡಿಕೊಂಡು ಭರ್ತಿಮಾಡಿದ ಅರ್ಜಿಯನ್ನು ಜೂನ್ 20 ರೊಳಗೆ ಸಲ್ಲಿಸಬೇಕು.
ಅಭ್ಯರ್ಥಿಗಳ ವಿದ್ಯಾರ್ಹತೆ ಕರ್ನಾಟಕದಲ್ಲಿ 2 ವರ್ಷಗಳ ಐ.ಟಿ.ಐ ಹಾಗೂ ಪಿಯುಸಿ (ತಾಂತ್ರಿಕ ವಿಷಯಗಳು) ವ್ಯಾಸಂಗ ಮಾಡಿ ಉತ್ತೀರ್ಣರಾಗಿರಬೇಕು. ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಜೂನ್ 21ರಂದು ಮಧ್ಯಾಹ್ನ 3 ಗಂಟೆಯ ನಂತರ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಸಾಮಾನ್ಯ ಅಭ್ಯರ್ಥಿಗಳ ಅರ್ಜಿ ಶುಲ್ಕ ರೂ.100 ಹಾಗೂ ಎಸ್.ಸಿ. ಎಸ್.ಟಿ. ಪ್ರವರ್ಗ-1 ರ ಆಭ್ಯರ್ಥಿಗಳ ಶುಲ್ಕ ರೂ.50 ಆಗಿರುತ್ತದೆ.
ಮೆರಿಟ್ ಪ್ರಕಾರ ಸೀಟು ಆಯ್ಕೆ ಮಾಡಿಕೊಂಡು ಪ್ರವೇಶ ಪಡೆಯಲು ಜೂನ್ 22 ರಿಂದ ಜೂನ್ 24 ರವರಗೆ ಪ್ರವೇಶ ಪ್ರಕ್ರಿಯೆ ನಡೆಯುವುದು. ಜೂನ್ 23 ರಿಂದ ಜೂನ್ 30 ರವರಗೆ ಭರ್ತಿಯಾಗದೆ ಉಳಿಯುವ ಸೀಟುಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು ಎಂದು ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ಬಿ. ರಮೇಶ್ ತಿಳಿಸಿದ್ದಾರೆ.