ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಬಿಎಂಆರ್‌ಸಿಎಲ್ ತುಸು ದರ ಇಳಿಕೆ ಮಾಡುವ ಮೂಲಕ ಪ್ರಯಾಣಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.
ಕನಿಷ್ಠ ದರ 10 ರೂ. ಗರಿಷ್ಠ ದರ 90 ರೂ. ಯಥಾಸ್ಥಿತಿ ಮುಂದುವರಿಯಲಿದ್ದು, ಶೇ. 70ರಿಂದ ಶೇ. 100ರಷ್ಟು ದರ ಹೆಚ್ಚಳವಾದ ಕಡೆ ಮಾತ್ರ ಶೇ.30ರವರೆಗೆ ದರ ಕಡಿತ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಸ್. ಮಹೇಶ್ವರರಾವ್ ತಿಳಿಸಿದ್ದಾರೆ. ಕೆಲವು ಸ್ಟೇಜ್‌ಗಳಲ್ಲಿ ಶೇಕಡಾ 70ಕ್ಕಿಂತ ದರ ಹೆಚ್ಚಾಗಿದೆ. ಈ ಸ್ಟೇಜ್‌ಗಳಲ್ಲಿ ಮಾತ್ರ ದರ ಇಳಿಕೆ ಮಾಡಲಾಗುವುದು.
ಇದರಿಂದ 2.5 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ನೂತನ ದರ ಫೆಬ್ರವರಿ 14ರಿಂದಲೇ ಜಾರಿಗೆ ಬರಲಿದೆ ಎಂದರು. ಅಧಿಕಾರಿಗಳು ಮತ್ತು ಸಿಬ್ಬಂದಿಯ ವೇತನ ಶೇ. 43ರಷ್ಟು ಹೆಚ್ಚಳವಾಗಿದೆ. ವಿದ್ಯುತ್ ವೆಚ್ಚವು ಶೇ. 40ರಷ್ಟು ಜಾಸ್ತಿಯಾಗಿದೆ. ಕೆಲವು ನಿಲ್ದಾಣಗಳು ಹಳೆಯದಾಗಿದ್ದು ನಿರ್ವಹಣೆಯ ವೆಚ್ಚ ಶೇ. 60ರಷ್ಟು ಹೆಚ್ಚಾಗಿದೆ. ಇವುಗಳನ್ನೆಲ್ಲ ಪರಿಶೀಲಿಸಿ ದರ ನಿಗದಿ ಸಮಿತಿ ವರದಿ ನೀಡಿದೆ,” ಎಂದು ತಿಳಿಸಿದರು.
ಮೆಟ್ರೋ ಪರಿಷ್ಕೃತ ದರ ಮೆಜೆಸ್ಟಿಕ್ನಿಂದ ಅತ್ತಿಗುಪ್ಪೆ : 30 ರೂಪಾಯಿ ಮೆಜೆಸ್ಟಿಕ್ನಿಂದ ಬೈಯಪ್ಪನಹಳ್ಳಿ : 50 ರೂಪಾಯಿ ಮೆಜೆಸ್ಟಿಕ್ನಿಂದ ಬೆನ್ನಿಗಾನಹಳ್ಳಿ: 50 ರೂಪಾಯಿ ಮೆಜೆಸ್ಟಿಕ್ನಿಂದ ಬನಶಂಕರಿ-40 ರೂಪಾಯಿ ಮೆಜೆಸ್ಟಿಕ್ನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ- 10 ರೂಪಾಯಿ ಮೆಜೆಸ್ಟಿಕ್ನಿಂದ ದಾಸರಹಳ್ಳಿ- 60 ರೂಪಾಯಿ ಮೆಜೆಸ್ಟಿಕ್ನಿಂದ ದೊಡ್ಡಕಲ್ಲಸಂದ್ರ- 60 ರೂಪಾಯಿ ಮೆಜೆಸ್ಟಿಕ್ನಿಂದ ಗರುಡಾಚಾರ್ಪಾಳ್ಯ- 60 ರೂಪಾಯಿ ಮೆಜೆಸ್ಟಿಕ್ನಿಂದ ಚನ್ನಸಂದ್ರ-80 ರೂಪಾಯಿ