ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 3ನೇ ಪೂರಕ ಪರೀಕ್ಷೆ ವೇಳಾ ಪಟ್ಟಿ ಪ್ರಕಟ.!

 

ಬೆಂಗಳೂರು : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 3ನೇ ಪೂರಕ ಪರೀಕ್ಷೆಯು ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರೀಕ್ಷೆಯು ಜೂನ್ 24ರಿಂದ ಜುಲೈ 5ರವರೆಗೆ ಪರೀಕ್ಷೆ ನಡೆಯಲಿದೆ.

ಇಲ್ಲಿದೆ ದ್ವಿತೀಯ ಪಿಯುಸಿ ಪರೀಕ್ಷೆ -3ರ ವೇಳಾಪಟ್ಟಿ

Advertisement

ಜೂನ್ 24- ಕನ್ನಡ, ಅರೇಬಿಕ್

ಜೂನ್ 25- ಇಂಗ್ಲೀಷ್

ಜೂನ್ 26- ಸಮಾಜಶಾಸ್ತ್ರ , ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ

ಜೂನ್ 27- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ

ಜೂನ್ 28- ಅರ್ಥಶಾಸ್ತ್ರ, ರಸಾಯನಶಾಸ್ತ್ರ

ಜೂನ್ 29 – ಇತಿಹಾಸ, ಭೌತಶಾಸ್ತ್ರ

ಜುಲೈ 1 – ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ

ಜುಲೈ 2 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ

ಜುಲೈ 3 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ

ಜುಲೈ 4- ಹಿಂದಿ

ಜುಲೈ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಹಾಗೂ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ

ವಿದ್ಯಾರ್ಥಿಗಳು ಮಂಡಳಿಯ ವೆಬ್ಸೈಟ್ ಮೂಲಕ ನೇರವಾಗಿ ಪರೀಕ್ಷೆ 3ಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಮೇ 23ರಿಂದ 28ರವರಗೆ ದಂಡ ರಹಿತ ನೋಂದಣಿ ಮಾಡಿಕೊಳ್ಳಬಹುದು.  ಮೇ 29ರಿಂದ 30ರವರೆಗೆ ದಂಡ ಸಹಿತ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement