ಮುಂಬೈ : ಬಾಲಿವುಡ್ ಸ್ಟಾರ್ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿ ಮಗಳು ಆರಾಧ್ಯ ಶಾಲೆಗೆ ಜೊತೆಯಾಗಿ ಎಂಟ್ರಿ ಕೊಟ್ಟಿದ್ದು, ಈ ಮೂಲಕ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ್ದಾರೆ.
ಆರಾಧ್ಯ ಧೀರುಭಾಯ್ ಅಂಬಾನಿ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಗಳು ಆರಾಧ್ಯಳ ಶಾಲೆಯ ಕಾರ್ಯಕ್ರಮಕ್ಕೆ ಅಮಿತಾಬ್ ಬಚ್ಚನ್ ಅಭಿಷೇಕ್, ಐಶ್ವರ್ಯಾ ಜೊತೆಯಾಗಿ ಆಗಮಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಖತ್ ವೈರಲ್ ಆಗಿದೆ.
ಇನ್ನು ಈ ವಿಡಿಯೋದಲ್ಲಿ ಅಭಿಷೇಕ್, ಐಶ್ವರ್ಯಾ ಶಾಲೆಗೆ ಆಗಮಿಸಿದ್ದ ವೇಳೆ, ಇಬ್ಬರು ನಗು ನಗುತ್ತಾ ಬರುತ್ತಿದ್ದು, ಪತ್ನಿಯನ್ನು ಅಭಿಷೇಕ್ ಕೇರ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಅಂಬಾನಿ ಮಗ ಅನಂತ್ ಮದುವೆಯಲ್ಲಿ ಬಿಗ್‌ಬಿ ಕುಟುಂಬದ ಜೊತೆ ಫೋಟೋಶೂಟ್‌ಗೆ ನಿಲ್ಲದೇ ಐಶ್ವರ್ಯಾ ರೈ ಅವರು ಮಗಳೊಂದಿಗೆ ಪ್ರತ್ಯೇಕವಾಗಿ ನಿಂತಿದ್ದರು. ಈ ಘಟನೆಯಿಂದಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಡಿವೋರ್ಸ್ ಪಡೆಯುತ್ತಾರೆಂಬ ವದಂತಿಗೆ ಪುಷ್ಠಿ ನೀಡಿದಂತಾಗಿತ್ತು.