ದೆಹಲಿ: ದೆಹಲಿಯ ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹೀನಾಯ ಸೋಲು ಕಂಡಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಸೋಲು ಕಂಡಿದ್ದಾರೆ. ಜಂಗ್ಪುರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಸೋಡಿಯಾ ಅವರನ್ನು ಬಿಜೆಪಿ ಅಭ್ಯರ್ಥಿ ತನ್ವಿಂದರ್ ಸಿಂಗ್ 600 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅಬಕಾರಿ ಹಗರಣದಲ್ಲಿ ಸಿಲುಕಿದ್ದ ಮನೀಶ್ಗೆ ಮತದಾರರು ಸೋಲಿನ ರುಚಿ ಉಣಿಸಿದ್ದಾರೆ.
