ನವದೆಹಲಿ: ಹಿಂದೂ ಧರ್ಮ ಎಂದರೆ ಯಾರನ್ನೂ ಬಲವಂತವಾಗಿ ಜೈ ಶ್ರೀ ರಾಮ್ ಎಂದು ಹೇಳುವಂತೆ ಒತ್ತಾಯಿಸುವುದಲ್ಲ ಎಂದು ಲೇಖಕ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ತರೂರ್, ‘ಜೈ ಶ್ರೀ ರಾಮ್’ ಎಂದು ಹೇಳದಿದ್ದರೆ ಚಾಟಿಯೇಟು ಹೊಡೆಯುವುದಾಗಿ ಕೆಲವರು ಬೆದರಿಕೆ ಹಾಕುವುದು ಹಿಂದೂ ಧರ್ಮವಲ್ಲ. ನೀವು ಉತ್ತಮ ಹಿಂದೂ ಆಗಲು ನಾಲ್ಕು ಮಾರ್ಗಗಳಿವೆ (ಜ್ಞಾನ ಯೋಗ, ಭಕ್ತಿ ಯೋಗ, ರಾಜ ಯೋಗ ಮತ್ತು ಕರ್ಮ ಯೋಗ) ಎಂದು ಅಭಿಪ್ರಾಯಪಟ್ಟಿದ್ದಾರೆ.
