ನವದೆಹಲಿ : ರಾಜಕೀಯದಲ್ಲಿ ನಿವೃತ್ತಿ ಇಲ್ಲ, ದೇ ಶ ಮತ್ತು ಜನರಿಗಾಗಿ ಕೊನೆಯ ಉಸಿರು ಇರುವವರೆಗೂ ಸೇವೆ ಮಾಡಬೇಕು. ತಮ್ಮ ಸಿದ್ಧಾಂತದಲ್ಲಿ ನಂ ಬಿಕೆ ಇರುವವರು, ದೇಶ ಸೇವೆಮಾಡಲು ಬಯಸುವವರು, ಅವರ ಸಮುದಾಯಕ್ಕೆ ಸೇವೆ ಸಲ್ಲಿಸಲು ಬಯಸುವವರು ಕೊನೆಯ ಉಸಿರು ಇರುವವರೆಗೂ ಕೆಲಸಮಾಡಬೇಕು. ದೇಶದ ಜನರನ್ನು ಜಾಗೃತಗೊಳಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ನ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಅವರ ‘ಫೈವ್ ಡಿಕೇ ಡ್ಸ್ ಇನ್ ಪಾಲಿಟಿಕ್ಸ್’ ಜೀವನ ಚರಿತ್ರೆ ಬಿಡುಗಡೆ ಸಮಾರಂಭದಲ್ಲಿಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಮತ್ತು ಅದರ ಸಿದ್ಥಾಂತಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಸುಶೀಲ್ ಅವರ ಪಾತ್ರ ಪ್ರಮುಖವಾಗಿದೆ ಎಂದರು.ನಿಮಗೆ ಇನ್ನೂ 82–83 ವರ್ಷ ಅಷ್ಟೇ , ಮೋರಾರ್ಜಿ ದೇಸಾಯಿ ಅವರನ್ನು ನೋಡಿ. ರಾಜಕೀಯದಲ್ಲಿ ಯಾರೂ ನಿವೃತ್ತಿ ಹೊಂದಬಾರದು ಎಂದು ನಾನು ನಂಬುತ್ತೇನೆ ಎಂದು
ಸಚಿವ ಸ್ಥಾನ ಅಥವಾ ಇತರೆ ಉನ್ನತ ಸ್ಥಾನಗಳನ್ನು ಬಯಸಿ ಕೆಲಸ ಮಾಡಬಾರದು. ಬದಲಾಗಿ, ದೇಶದ ಜನತೆ ಮತ್ತು ಇಷ್ಟು ದಿನ ನಿಮ್ಮನ್ನು ಬೆಳೆಸಿದ ರಾಜಕೀಯ ಪಕ್ಷಕ್ಕೆ ರಿಟರ್ನ್ ಗಿಫ್ಟ್ ಎಂಬಂತೆ ರಾಜಕೀಯ ಸೇವೆ ಮಾಡಬೇಕು ಎಂದು ಖರ್ಗೆ ಹೇ ಳಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.