ನವದೆಹಲಿ : ಅಹಮದಾಬಾದ್ನಲ್ಲಿ ಇತ್ತೀಚೆಗೆ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರ ಸಹೋದರನ ಅಂತ್ಯಸಂಸ್ಕಾರ ನೆರವೇರಿಸಬೇಕಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಏಪ್ರಿಲ್ 12 ರಂದು ಲಂಡನ್ಗೆ ಹೊರಟಿದ್ದ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮತ್ತು ಕ್ಯಾಂಟೀನ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ 242 ಜನರಲ್ಲಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ರಮೇಶ್ ಕೂಡ ಒಬ್ಬರು.
ವಿಮಾನದಲ್ಲಿ ರಮೇಶ್ ತುರ್ತು ನಿರ್ಗಮನ ದ್ವಾರದ ಪಕ್ಕದಲ್ಲಿ 11A ನಲ್ಲಿ ಕುಳಿತಿದ್ದರು. ಅಪಘಾತದ ಸಂದರ್ಭದಲ್ಲಿ ಅವರ ಸೀಟು ಬೇರ್ಪಟ್ಟು ದೂರ ಹಾರಿತ್ತು. ಹೀಗಾಗಿ ಬೆಂಕಿಯಿಂದ ಪಾರಾಗಿದ್ದರು. ಸೀಟಿನ ಸಮೇತ ಕೆಳಗೆ ಹಾರಿದ್ದರು. ವಿಮಾನ ತುಂಡಾಗಿ ಸೀಟು ಕೂಡ ಕಳಚಿಬಂದಿತ್ತು ಎಂದು ವೈದ್ಯರಿಗೆ ರಮೇಶ್ ತಿಳಿಸಿದ್ದರು.