ಭಾರತೀಯ ಮೂಲದ ಕೆನಡಾದ ರ್ಯಾಪರ್ ಟಾಮಿ ಜೆನೆಸಿಸ್ ಹೊಸ ಆಲ್ಬಂ ಸಾಂಗ್ ಒಂದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಹಿಂದೂ ಮತ್ತು ಕ್ರಿಶ್ಮಿಯನ್ ಧರ್ಮದ ಅನುಯಾಯಿಗಳ ಕೋಪಕ್ಕೆ ಕಾರಣವಾಗಿದೆ. ಇದೀಗ ಗಾಯಕಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದು, ವಿಡಿಯೋ ಡಿಲೀಟ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಹೌದು.. ಗಾಯಕಿ ಟಾಮಿ ಜೆನೆಸಿಸ್ (ಜೆನೆಸಿಸ್ ಯಾಸ್ಮಿನ್ ಮೋಹನರಾಜ್) ಹೊಸ ಹಾಡು ‘ಟ್ರೂ ಬ್ಲೂ’ ವಿವಾದಕ್ಕೆ ಕಾರಣವಾಗಿದೆ. ಟ್ರೂ ಬ್ಲೂ ಹಾಡಿನಲ್ಲಿ ಟಾಮಿ, ಕಾಳಿ ಅವತಾರದಲ್ಲಿ ನಗ್ನವಾಗಿ ಕಾಣಿಸಿಕೊಂಡು ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಅಲ್ಲದೆ, ಕೈಯಲ್ಲಿ ಶಿಲುಬೆ ಹಿಡಿದು, ಅಸಭ್ಯವಾಗಿ ವರ್ತಿಸಿದ್ದಾರೆ.
ಟಾಮಿ ಜೆನೆಸಿಸ್ ‘ಟ್ರೂ ಬ್ಲೂ’ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಇನ್ನು ವಿಡಿಯೋವನ್ನು ಗಮನಿಸಿದರೆ, ಗಾಯಕಿ ಕಾಳಿ ಅವತಾರದಲ್ಲಿ ಬಂಗಾರದ ಆಭರಣ ಮತ್ತು ಹಣೆಗೆ ಸಿಂಧೂರ ಇಟ್ಟುಕೊಂಡು ಕೈಯಲ್ಲಿ ತ್ರೀಶೂಲ ಬದಲಿಗೆ ಶಿಲುಬೆ ಹಿಡಿದುಕೊಂಡಿರುವುದನ್ನು ಕಾಣಬಹುದು..
ಅಷ್ಟೇ ಅಲ್ಲ, ಶಿಲುಬೆಯನ್ನು ಬಹಳ ಕೆಟ್ಟದಾಗಿ ಬಳಸಿಕೊಂಡಿರುವುದು ಕ್ರಿಶ್ಚಿಯನ್ನರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಹಿಂದೂ ಮತ್ತು ಕ್ರಿಶ್ಚಿಯನ್ ಅನುಯಾಯಿಗಳು ವಿಡಿಯೋವನ್ನು ತಕ್ಷಣ ಡಿಲೀಟ್ ಮಾಡಬೇಕು ಇಲ್ಲದಿದ್ದರೆ ದೂರು ನೀಡುವುದಾಗಿ ಟಾಮಿಗೆ ಎಚ್ಚರಿಕೆ ನೀಡಿದ್ದಾರೆ.