ಬೆಂಗಳೂರು: ಡೈರೆಕ್ಟೊರೇಟ್ ಜನರಲ್ ರಿಸೆಟ್ಲ್ಮೆಂಟ್ ಅವರ ಪ್ರಾಯೋಜಕತ್ವದಲ್ಲಿ ಮಾಜಿ ಸೈನಿಕರಿಗಾಗಿ ಬೆಂಗಳೂರಿನನ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಅಂಡ್ ಸೆಂಟರ್ನಲ್ಲಿ ಇದೇ ಫೆ.27ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.
ಆಸಕ್ತ ಮಾಜಿ ಸೈನಿಕರು ಮಾಜಿ ಸೈನಿಕರ ಗುರುತಿನ ಚೀಟಿ ಮತ್ತು ಬಯೋಡೇಟದ 5 ಪ್ರತಿಗಳೊಂದಿಗೆ ನೇರವಾಗಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 020-26341217 ಅಥವಾ 011-20863432 ಮತ್ತು ವೆಬ್ಸೈಟ್ [email protected] ಅನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ವಿ.ಹಿರೇಮಠ ತಿಳಿಸಿದ್ದಾರೆ.
































